ನಟರಾಜ ಸರ್ವಿಸ್ ಪವನ್ ಒಡೆಯರ್ ನಿರ್ದೇಶಿಸಿದ ೨೦೧೬ ರ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ಭಾವನಾತ್ಮಕ ಹಾಸ್ಯ ಚಲನಚಿತ್ರವಾಗಿದ್ದು, ಎನ್ ಎಸ್ ರಾಜ್‌ಕುಮಾರ್ ನಿರ್ಮಿಸಿದ್ದಾರೆ ಮತ್ತು ಪುನೀತ್ ರಾಜ್‌ಕುಮಾರ್ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಶರಣ್ ಮತ್ತು ಮಯೂರಿ ಕ್ಯಾತಾರಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದರೆ, ಅರುಲ್ ಕೆ ಸೋಮಸುಂದರಂ ಅವರ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ "ಅಲ್ಲಾ ಅಲ್ಲಾ ನಟರಾಜ ಬರ್ತಾನಲ್ಲಾ" ಹಾಡಿನಲ್ಲಿ ಪಿ ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ತಾರಾಗಣ == ನಟರಾಜನಾಗಿ ಶರಣ್ ಸಹನಾ ಪಾತ್ರದಲ್ಲಿ ಮಯೂರಿ ಕ್ಯಾತಾರಿ ರಾಕ್‌ಲೈನ್ ವೆಂಕಟೇಶ್ ಅಪೂರ್ವ ಯತಿರಾಜ್ ನಾಗರಾಜ್ ಮೂರ್ತಿ ವಿಶೇಷ ಪಾತ್ರದಲ್ಲಿ ಪಿ.ರವಿಶಂಕರ್ == ನಿರ್ಮಾಣ == ಚಿತ್ರದ ಪ್ರಧಾನ ಛಾಯಾಗ್ರಹಣ ೨೦೧೫ರ ಅಕ್ಟೋಬರ್ ನಲ್ಲಿ ಪ್ರಾರಂಭವಾಯಿತು. ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ದಾಂಡೇಲಿ ಮತ್ತು ಸಿರ್ಸಿಯಲ್ಲಿ ಚಿತ್ರೀಕರಣ ನಡೆಸಲಾಯಿತು ಮತ್ತು ಜೂನ್ ೨೦೧೬ರ ಆರಂಭದಲ್ಲಿ ಹಲವಾರು ಪ್ರಕಟಣೆಗಳ ನಂತರ, ಚಲನಚಿತ್ರವು ಅಂತಿಮವಾಗಿ ೧೭ ನವೆಂಬರ್ ೨೦೧೬ರಂದು ಬಿಡುಗಡೆಯಾಯಿತು == ಧ್ವನಿಮುದ್ರಿಕೆ == ಅನೂಪ್ ಸೀಳಿನ್ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಚಿತ್ರದ ಆರಂಭಿಕ ಹಾಡನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ ಮತ್ತು ಪವನ್ ಒಡೆಯರ್ ಬರೆದಿದ್ದಾರೆ. ಒಡೆಯರ್ ಅವರ ಪ್ರಕಾರ, ಹಾಡು "ನಡೆಯುವುದರ ಪ್ರಯೋಜನಗಳ" ಬಗ್ಗೆ ಹೇಳುತ್ತದೆ ಮತ್ತು ತಾತ್ವಿಕ ಸಂದೇಶವನ್ನು ಹೊಂದಿದೆ. ಆಡಿಯೋವನ್ನು ೨೮ ಜುಲೈ ೨೦೧೬ ರಂದು ಬಿಡುಗಡೆ ಮಾಡಲಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಫೇಸ್ಬುಕ್ ಪುಟ